KATestbook!
Find the Best Categorys to score and rise!.
Read the lastest information.
Plants produce only 30% of the oxygen in our atmosphere, the remaining 70% comes from the seas and oceans.
ನಮ್ಮ ವಾತಾವರಣದಲ್ಲಿ 21% ಆಮ್ಲಜನಕವಿದೆ ಅದರಲ್ಲಿ ಗಿಡಮರಗಳು 30% ಆಮ್ಲಜನಕ ಉತ್ಪಾದಿಸಿದರೇ ಇನ್ನುಳಿದ 70% ಆಮ್ಲಜನಕವನ್ನು ಸಮುದ್ರ ಮಹಾಸಾಗರ ಮತ್ತು ಸರೋವರಗಳಿಂದ ರೂಪುಗೊಳ್ಳುತ್ತದೆ
ಅದು ಹೇಗೆಂದರೆ ಸಮುದ್ರ ಮಹಾಸಾಗರಗಳಲ್ಲಿ ಆಳಕ್ಕೆ ಹೋದಂತೆ ಸೂರ್ಯನ ಬೆಳಕು ತಲುಪುವುದಿಲ್ಲ ಆದರೆ 200ಮೀಟರ್ ಗಳ ವರೆಗೆ ಸೂರ್ಯನ ಬೆಳಕು ತಲುಪುತ್ತದೆ
ಅಲ್ಲಿ ಫ್ಲೈಟೊ ಪ್ಲಾಂಕ್ಟನ್ ಮತ್ತು ಇನ್ನಿತರ ಸಸ್ಯಗಳು ಸೂರ್ಯನ ಬೆಳಕನ್ನು ಹೀರಿಕೊಂಡು ದ್ವಿತಿ ಸಂಶ್ಲೇಷಣೆ ಮುಖಾಂತರ ಆಮ್ಲಜನಕವನ್ನು ಉತ್ಪಾದಿಸುತ್ತವೆ
ಸಮುದ್ರದಲ್ಲಿಯೂ ಕೂಡ ಜೀವಿಗಳಿವೆ ಅವುಗಳಿಗೂ ಕೂಡ ಉಸಿರಾಡಲು ಆಮ್ಲಜನಕ ಬೇಕು
ದೊಡ್ಡ ದೊಡ್ಡ ಕಾರ್ಖಾನೆಗಳಿಂದ ಎಷ್ಟೋ ತ್ಯಾಜ್ಯಗಳು ಮತ್ತು ರಾಸಾಯಾಣಿಕಗಳು ನೇರವಾಗಿ ಸಮುದ್ರ ಮಹಾಸಾಗರ ಗಳಿಗೆ ಸೇರಿ ನೀರನ್ನು ಕಲುಷಿತ ಮಾಡಿ ಅಲ್ಲಿಯ ಜೀವಿಗಳಿಗೆ ಬದುಕಲು ಪರದಾಡುವಂತಾಗಿದೆ.
ವರದಿ ಪ್ರಕಾರ ಸಮುದ್ರ ಮತ್ತು ಮಹಾಸಾಗರದಲ್ಲಿ ಒಂದು ಚದರ್ ಮೈಲಿಗೆ 46,000 ಪ್ಲಾಸ್ಟಿಕ್ ಕಣಗಳು ಕಂಡುಬಂದಿದೆ
ಆದರೆ ಅಲ್ಲಿರುವ ತ್ಯಾಜ್ಯವನ್ನು ಹೊರ ತೆಗೆಯಲು ಮೂರರಿಂದ ನಾಲ್ಕು ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ